Wednesday, July 24, 2013
ಮಳೆ ಬರ್ತಾ ಇದೆ ಅಂತೆ..
ನಮ್ಮ ಮನಿ ಹತ್ರ ಭಾಳ ಖಾಲಿ ಜಾಗ ಇದ್ದದ್ದಕ್ಕ ಮಂದಿ ವಾಕಿಂಗ್ ಗೆ ಬಂದಿರ್ತಾರ..ಹಿಂಗ ಸಲ್ಪ ದಿನದ ಹಿಂದ ಸಲ್ಪ ಮಂದಿ ವಾಕಿಂಗ್ ಅಂತ ಬಂದು ಹರಟಿ ಹೊಡಕೋತ ಕೂತಿದ್ರು..ಸಲ್ಪ ಹೊತ್ತಿನ ಮ್ಯಾಲೆ "ಮಳೆ ಬರ್ತಾ ಇದೆ ಅಂತೆ..ಮಳೆ ಬರ್ತಾ ಇದೆ ಅಂತೆ.." ಅಂತ ಮಾತಾಡೋದು ತಪ್ಪಿ ನನ್ನ ಕಿವಿಗೆ ಬಿತ್ತು. ನಾನು ಅವರ ಹತ್ರ ಹೋಗಿ ಕೇಳಿದಾಗ ಅವರು ಹೇಳಿದ್ರು.."ಸಾರ್ ಕ್ಯಾಲ್ಕಟ್ಟಾ ನಲ್ಲಿ ಮಳೆ ಆಗ್ತಾ ಇದೆ ಅಂತೆ..2-3 ದಿನ ಡಿಪ್ರೆಷೆನ್ನು". ಆತ್ ತೊಗೊ ಇನ್ನು 2-3 ದಿನ ತಣ್ಣೀರು ಸ್ನಾನನ ಗತಿ ಅಂತ ಗೊಣಗಿಕೊಳ್ಲಕೋತ ಬಂದೆ. ಅಲಾ ಇವನ ಸಾವಿರಾರು ಮೈಲಿ ದೂರ ಇರೋ ಕಲ್ಕತ್ತದಾಗ ಮಳಿ, ಡಿಪ್ರೆಶನ್ ಆದ್ರ ನಮ್ಮ ಬೆಂಗಳೂರು ಒಳಗ ಯಾಕ ತಣ್ಣೀರು ಸ್ನಾನ ಅಂತ ಕೇಳ್ತೀರೇನು..ಇಲ್ಲ್ ಬೆಂಗಳೂರು ಒಳಗ ಹಂಗರಿಪಾ..ಕಲ್ಕತ್ತಾ ದೊಳಗ, ಚೆನ್ನೈ ಒಳಗ, ಹೈದ್ರಾಬಾದ್ ಒಳ್ಗ ಎಲ್ಲೇ ಮಳಿ ಆಗ್ಲಿ ಬೆಂಗಳೂರು ಒಳಗ ಇರ್ಲಿ ಅಂತ ಬಫರ್ ಇಟ್ಕೊಂಡು ಒಂದು ದಿನ ಹೆಚ್ಚ ಮಾಡಾ ಹಾಕಿಬಿಡ್ತದ..ಹಂಗ ಸಲ್ಪ ಜಿಟಿ ಜಿಟಿ ಮಳೀನೂ ಬರ್ತದ..ಹಿಂಗ ಆತು ಅಂದ್ರ ಮನಿ ಮ್ಯಾಲೆ ಇರೋ ಸೋಲಾರ್ ವಾಟರ್ ಹೀಟರ್ ಹೆಂಗ ಕೆಲಸಾ ಮಾಡಬೇಕು ಹೇಳ್ರಿ...ಅದಕ್ಕ ನಮಗ ತಣ್ಣೀರು ಸ್ನಾನ !! ದೇಶದ ಎಲ್ಲಾದ್ರೂ ಡಿಪ್ರೆಶನ್ ಅಂದ್ರ ನಮಗೂ ಒಂದು ಥರ ಡಿಪ್ರೆಶನ್ ಸುರು ಆಗ್ತದ..ತಣ್ಣೀರು ಸ್ನಾನ ಸುರು ಆಗ್ತದ..
Subscribe to:
Post Comments (Atom)
No comments:
Post a Comment